ಭೈರತಿ ರಣಗಲ್ ಕಪ್ಪು ಶರ್ಟ್ ಧರಿಸೋದರ ಸಂಕೇತ ಏನು? ಶಿವಣ್ಣ ಕೊಟ್ರು ಉತ್ತರ

May 27, 2023

 

ಭೈರತಿ ರಣಗಲ್ ಪಾತ್ರವೇ ಸಿಂಪಲ್. ಲುಂಗಿ ತೊಟ್ಟು, ಕಪ್ಪು ಬಣ್ಣದ ಶರ್ಟ್ ಧರಿಸುತ್ತಾನೆ ಈ ಭೈರತಿ ರಣಗಲ್. ಶಿವಣ್ಣ ಅವರು ಮುಹೂರ್ತಕ್ಕೆ ಇದೇ ಲುಕ್​ನಲ್ಲಿ ಬಂದಿದ್ದರು.

ಶಿವರಾಜ್​ಕುಮಾರ್ (Shivarajkumar) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ‘ಭೈರತಿ ರಣಗಲ್​’ ಸಿನಿಮಾದ (Bhairathi Ranagal Movie) ಮುಹೂರ್ತ ಇತ್ತೀಚೆಗೆ ನಡೆಯಿತು. ಈ ಚಿತ್ರಕ್ಕೆ ನರ್ತನ್ ನಿರ್ದೇಶನ ಮಾಡುತ್ತಿದ್ದಾರೆ. ಭೈರತಿ ರಣಗಲ್ ಪಾತ್ರವೇ ಸಿಂಪಲ್. ಲುಂಗಿ ತೊಟ್ಟು, ಕಪ್ಪು ಬಣ್ಣದ ಶರ್ಟ್ ಧರಿಸುತ್ತಾನೆ ಈ ಭೈರತಿ ರಣಗಲ್. ಶಿವಣ್ಣ ಅವರು ಮುಹೂರ್ತಕ್ಕೆ ಇದೇ ಲುಕ್​ನಲ್ಲಿ ಬಂದಿದ್ದರು. ಅವರು ‘ಕಪ್ಪು ಎಂದರೆ ಕಸ್ತೂರಿ’ ಎಂದರು.

Source: TV9 Kannada