ಪಂಜಾಬ್ನ ರಂಜಿತ್ ಸಾಗರ್ ಡ್ಯಾಂ ಬಳಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ
ಪತಾನ್ಕೋಟ್: ಪಂಜಾಬ್ ರಾಜ್ಯದ ಪತಾನ್ಕೋಟ್ ಬಳಿ ಇರುವ ರಂಜಿತ್ ಸಾಗರ್ ಡ್ಯಾಂನಲ್ಲಿ (Ranjit Sagar Dam) ಭಾರತೀಯ ಸೇನೆಯ (Indian Army) ಹೆಲಿಕಾಪ್ಟರ್ ಪತನವಾಗಿದೆ. ರಂಜಿತ್ ಸಾಗರ್ ಡ್ಯಾಂನ ನೀರಿನೊಳಗೆ ಇಂದು ಬೆಳಗ್ಗೆ ಹೆಲಿಕಾಪ್ಟರ್ ಬಿದ್ದಿದ್ದು, ಈ ಬಗ್ಗೆ ಇಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಂಜಾಬ್ನ ಪತಾನ್ಕೋಟ್ನಿಂದ (Pathankot) 30 ಕಿ.ಮೀ. ದೂರದಲ್ಲಿ ಈ ಡ್ಯಾಂ ಇದೆ. ಸೇನಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪ್ರಾಣಾಪಾಯದ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಜಮ್ಮು ಕಾಶ್ಮೀರ ಮತ್ತು ಪಂಜಾಬ್ ರಾಜ್ಯಗಳ ಗಡಿಯಲ್ಲಿರುವ ರಂಜಿತ್ ಸಾಗರ್ ಡ್ಯಾಂ ಜಮ್ಮು ಕಾಶ್ಮೀರದ ಕಥುವಾ ಹಾಗೂ ಪಂಜಾಬ್ನ ಪತಾನ್ಕೋಟ್ ಬಳಿ ಇದೆ. ಇಲ್ಲಿರುವ ಕೆರೆಯೊಳಗೆ ಹೆಲಿಕಾಪ್ಟರ್ ಪತನವಾಗಿದೆ. ಇಂದು ಬೆಳಗ್ಗೆ 10.43ಕ್ಕೆ ಹೆಲಿಕಾಪ್ಟರ್ ಪತನವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆ ಹೆಲಿಕಾಪ್ಟರ್ ಒಳಗೆ ಎಷ್ಟು ಜನರಿದ್ದರು, ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
Source: Tv9 kannada