ನೇತಾಜಿ ಪರಂಪರೆ ಶಾಶ್ವತ; ದೀದಿ ವೋಟ್‌ಬ್ಯಾಂಕ್ ಪಾಲಿಟಿಕ್ಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ!

Feb 19, 2021

ಕೋಲ್ಕತ್ತಾ(ಫೆ.19): ಕ್ರಾಂತಿಕಾರಿಗಳಿಗೆ ಗೌರವ ನಮನ ಶೌರ್ಯಾಂಜಲಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳದ ಭವ್ಯ ಪರಂಪರೆ ಅಳಿಸಿಹಾಕುವ ಯತ್ನ ನಡೆಸುತ್ತಿರುವ ಮಮತಾ ಬ್ಯಾನರ್ಜಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಕೀರ್ತಿ ಪತಾಕೆಯನ್ನು ಕಿತ್ತೊಗೆಯುವ ಪ್ರಯತ್ನ ಮಾಡಲಾಗಿದೆ. ಆದರೆ ಅದು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಸ್ವಾತಂತ್ರ್ಯ ವೀರ, ದೇಶಭಕ್ತ ಸುಭಾಷ್ ಚಂದ್ರಬೋಸ್ ಅವರ ಕೀರ್ತಿಯನ್ನು ಮರೆಮಾಚುವ, ನೇತಾಜಿಯನ್ನು ಮರೆತು ಬಿಡುವ ಪ್ರಯತ್ನಗಳು ನಡೆದಿದೆ. ಆದರೆ ನೇತಾಜಿ ಸೇವೆ ಅಜರಾಮರವಾಗಿದೆ. ಅವರ ಕೂಡುಗೆ, ಮಾರ್ಗದರ್ಶಗಳು ಎಲ್ಲರಿಗೂ ದಾರಿದೀಪವಾಗಿದೆ. ಯಾವುದೇ ಕಾರಣಕ್ಕೂ ನೇತಾಜಿ ಪರಂಪರೆ ಅಳಿಸಲು ಸಾಧ್ಯವಿಲ್ಲ ಎಂದು ಶಾ ಹೇಳಿದ್ದಾರೆ

ಕೇಂದ್ರ ಸರ್ಕಾರ ನೇತಾಜಿ 125ನೇ ಜಯಂತಿ ಆಚರಣೆಯನ್ನು ವರ್ಷವಿಡಿ ಆಚರಿಸುತ್ತಿದೆ. ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ಪರಂಪರೆಯನ್ನ ಎತ್ತಿ ಹಿಡಿಯುವ ಹಾಗೂ ಬಂಗಾಳ ಭವಿಷ್ಯವನ್ನು ಉಜ್ವಲಗೊಳಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

Source:Suvarna News