ನೀವು ಕೊಟ್ಟ ನಗು ಧಿರಿಸಿರುವೆ; ವ್ಯಾಲೆಂಟೈನ್ಸ್ ಡೇ ಆಚರಿಸಿದ ರಾಕಿಂಗ್ ದಂಪತಿ!

Feb 15, 2021

ಕನ್ನಡ ಚಿತ್ರರಂಗದ ಮೋಸ್ಟ್‌ ಬ್ಯೂಟಿಫುಲ್, ಟ್ಯಾಲೆಂಟೆಡ್‌ ಹಾಗೂ ಡೌನ್‌ ಟು ಅರ್ಥ್ ಕಪಲ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್‌ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್. ಹಲವು ವರ್ಷಗಳ ಕಾಲ ಪ್ರೀತಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ವಿಶೇಷವಾದ ದಿನಗಳನ್ನು just committed ಲವರ್ಸ್ ರೀತಿ ಸಂಭ್ರಮಿಸುತ್ತಾರೆ ಈ ದಂಪತಿ. ಪ್ರೇಮಿಗಳ ದಿನದಂದು ರಾಧಿಕಾ ಅಪ್ಲೋಡ್ ಮಾಡಿದ ಫೋಟೋ ನೋಡಿದ್ದೀರಾ?
‘ನೀವು ಕೊಟ್ಟ ನಗುವನ್ನು ಧರಿಸಿರುವೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ಎಂದು ಬರೆದುಕೊಂಡು ಯಶ್‌ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಟಾಪ್‌ನಲ್ಲಿ ರಾಧಿಕಾ ವೈಟ್ ಆ್ಯಂಡ್ ಬ್ಲಾಕ್ ಶರ್ಟ್‌ನಲ್ಲಿ ಯಶ್‌ ಮಿಂಚುತ್ತಿದ್ದಾರೆ.
ಕಿರುತೆರೆ ಮೂಲಕ ಬಣ್ಣದ ಲೋಕದ ಜರ್ನಿ ಅರಂಭಿಸಿದ ಈ ಮುದ್ದಾದ ಜೋಡಿ ಸ್ಟಾರ್ ನಟರಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಒಟ್ಟಿಗೆ ಪಡೆದುಕೊಂಡಿದ್ದಾರೆ. ಒಬ್ಬರನ್ನೊಬ್ಬರು ಸರ್ಪ್ರೈಸ್ ಮಾಡುತ್ತಾ, ಈಗಲೂ ಹಲವು ಪ್ರೇಮಿಗಳಿಗೆ ಸ್ಪೂರ್ತಿಯಾಗಿದೆ ಈ ಜೋಡಿ. ‘ವ್ಯಾಲೆಂಟೈನ್ಸ್‌ ಡೇ ಕಂಪ್ಲೀಟ್‌ ಆಗಿದ್ದೇ ನಿಮ್ಮ ಪೋಟೋ ನೋಡಿದ ಮೇಲೆ’, ‘ಕಪಲ್ ಗೋಲ್ಸ್‌’ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Source:Suvarna News