ಡಿಸಿ, ತಹಸೀಲ್ದಾರ್ ತಲೆದಂಡದೊಂದಿಗೆ ದೇವಸ್ಥಾನ ಪುನರ್ ನಿರ್ಮಿಸಬೇಕು

Sep 17, 2021

ಮೈಸೂರು,ಸೆ.16(ಪಿಎಂ)- ದೇವಾ ಲಯ ನೆಲಸಮ ಸಂಬಂಧ ಜಿಲ್ಲಾಧಿಕಾರಿ, ತಹಸೀಲ್ದಾರ್ ತಲೆದಂಡ ಆಗಲೇಬೇಕು. ದೇವಸ್ಥಾನದ ಪುನರ್ ನಿರ್ಮಾಣದ ಜೊತೆಗೆ ರಾಜ್ಯದ ಎಲ್ಲಾ ದೇವಸ್ಥಾನಗಳ ಸಂರಕ್ಷಣೆ ಹೊಣೆ ಸರ್ಕಾರದ್ದೆಂದು ಮುಖ್ಯ ಮಂತ್ರಿಗಳು ಘೋಷಿಸಬೇಕು. ಇನ್ನು ಹತ್ತು ದಿನಗಳಲ್ಲಿ ನಮ್ಮ ಈ ಬೇಡಿಕೆ ಈಡೇರಿ ಸದಿದ್ದರೆ, ಮೈಸೂರಿನಿಂದ ಪಾದಯಾತ್ರೆ ಮೂಲಕ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕ ಲಾಗುವುದೆಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಎಚ್ಚರಿಕೆ ನೀಡಿದರು.

ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಎದುರು ನಂಜನ ಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಆದಿಶಕ್ತಿ ಶ್ರೀ ಮಹದೇವಮ್ಮ ಭೈರವೇಶ್ವರ ದೇವಸ್ಥಾನ ತೆರವು ಸಂಬಂಧ ಮೈಸೂರು ಜಿಲ್ಲಾಧಿಕಾರಿ, ನಂಜನಗೂಡು ತಹಸೀ ಲ್ದಾರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿ ಭಟನಾ ಸಭೆಯಲ್ಲಿ ಮಾತನಾಡಿದರು.

ಸುಪ್ರಿಂಕೋರ್ಟ್ ಆದೇಶದ ನೆಪದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಂದ ಹಿಡಿದು ನಂಜನಗೂಡಿನ ತಹಸೀಲ್ದಾರ್ ವರೆಗೆ ತೋಚಿದಂತೆ ಅನ್ಯಾಯ ಎಸಗಿದ್ದು, ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ನಡೆಸಲಾಗಿದೆ. ಇದೇ ಮೊದಲು, ಇದೇ ಕೊನೆ ಘಟನೆ ಆಗಬೇಕು. ಹಿಂದೂ ಸಮಾಜ ಇಂತಹ ಆಕ್ರಮಣಗಳಿಗೆ ತಲೆ ತಗ್ಗಿಸುವುದಿಲ್ಲ ಎಂದು ಕಿಡಿಕಾರಿದರು.

ಕರ್ನಾಟಕದ ಯಾವುದೇ ಊರಿನಲ್ಲಿ ದೇವಸ್ಥಾನ ಧ್ವಂಸಗೊಳಿಸುವುದಕ್ಕೆ ಕೈ ಹಾಕ ಬಾರದು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹಿಂದೂ ಸಮಾಜ ಸಂಘಟಿತ ಹೋರಾಟ ವನ್ನು ಸರ್ಕಾರದ ವಿರುದ್ಧವೇ ನಡೆಸಲಿದೆ. ಮಹದೇಮ್ಮ ದೇವಸ್ಥಾನ ನೆಲಸಮಗೊಳಿಸಿ 10 ದಿನಗಳು ಕಳೆದಿದ್ದು, ಹಿಂದೂ ಜಾಗ ರಣ ವೇದಿಕೆ ಕೊಟ್ಟ ಎಚ್ಚರಿಕೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಇದನ್ನು ನಾವು ಸಹಿ ಸುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ಪರವೂ ಅಲ್ಲ. ವಿರುದ್ಧವೂ ಅಲ್ಲ. ನಾನು ಹಿಂದುತ್ವದ ಪರ ಎಂದು ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಕಿಡಿ: ಅಜ್ಞಾನಿ, ಅವಿವೇಕಿ ಸರ್ಕಾ ರದ ಮುಖ್ಯ ಕಾರ್ಯದರ್ಶಿಗೆ ಕೇಳುತ್ತೇನೆ. 30 ವರ್ಷಗಳಿಂದ ಅಧಿಕಾರದ ಗದ್ದುಗೆ ಅನುಭವಿಸಿದ ನಿನಗೆ ಸುಪ್ರಿಂ ಕೋರ್ಟ್ ಆದೇಶ ಸರಿಯಾಗಿ ಓದುವಷ್ಟು ಬುದ್ಧಿ ವಂತಿಕೆ ಇಲ್ಲವೇ? ಎಂದು ಜಗದೀಶ್ ಕಾರಂತ್ ಕಿಡಿಕಾರಿದರು.

ದಿನಕ್ಕೊಂದು ದೇವಸ್ಥಾನ ಒಡೆದು, ಗಂಟೆ ಗಂಟೆಗೆ ನನಗೆ ವರದಿ ನೀಡ ಬೇಕೆಂದು ಆದೇಶವನ್ನು ನೀಡಿದ್ದಾರೆ ಎಂಬುದು ಮಾಧ್ಯಮದ ವರದಿ ಮೂಲಕ ತಿಳಿದಿದ್ದೇನೆ. ಅದರ ಸತ್ಯಾಸತ್ಯತೆ ಗೊತ್ತಿಲ್ಲ. ಒಂದು ವೇಳೆ ಅದು ಸತ್ಯವೇ ಆಗಿದ್ದರೆ, ಅವಿವೇಕಿ ಮುಖ್ಯ ಕಾರ್ಯದರ್ಶಿ ಮೊದಲು ಸುಪ್ರಿಂಕೋರ್ಟ್ ಆದೇಶ ಸರಿಯಾಗಿ ಓದಬೇಕು. ತೆರವುಗೊಳಿಸುವುದು ಅಂತಿಮ ಆಯ್ಕೆ ಎಂದು ಆದೇಶದಲ್ಲಿ ಬಹಳ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.

ನಮ್ಮ ಹೋರಾಟ ಜಾತಿ, ಭಾಷೆ, ಪಂಥ, ಪಂಗಡ, ಪಕ್ಷ ಇತ್ಯಾದಿಗಳ ಹೆಸರಿ ನಲ್ಲಿ ಮುಚ್ಚಿ ಹೋಗಬಾರದು. ಹುಚ್ಚಗಣಿ ಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗಲಭೆ ನಡೆದಿರುವ ಬಗ್ಗೆ ಮಾಧ್ಯಮ ಗಳಲ್ಲಿ ತಿಳಿದು, ನಿನ್ನೆ ಸಂಜೆ ಅಲ್ಲಿಗೆ ಹೋಗಿದ್ದೆ. ಉದ್ದೇಶಪೂರ್ವಕವಾಗಿ ಈ ಚಳವಳಿ ದಿಕ್ಕು ತಪ್ಪಿಸಲು ಬಂದವರು ಪೆಟ್ಟು ತಿಂದು ಹೋಗಿರಬಹುದೇ ಹೊರತು, ಅಲ್ಲಿ ಬೇರೇನು ನಡೆದಿಲ್ಲ. ಅಲ್ಲಿ ಇಡೀ ಗ್ರಾಮ ಒಗ್ಗಟ್ಟಿನಿಂದ ಇದೆ ಎಂದರು.
ಸ್ಥಳಕ್ಕೆ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ.ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿ, ಪ್ರತಿಭಟನಾ ಸಭೆ ಅಂತ್ಯ ಗೊಳಿಸಲಾಯಿತು. ಹುಚ್ಚಗಣಿ ಮಹ ದೇವಮ್ಮ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ನರಸಿಂಹೇಗೌಡ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಲಾಲಾ ಅಯ್ಯನ್, ಮೈಸೂರು ವಿಭಾಗದ ಅಧ್ಯಕ್ಷ ಲೋಹಿತ್ ಅರಸ್ ಇನ್ನಿತರರು ವೇದಿಕೆಯಲ್ಲಿದ್ದರು.

Source:mysurumithra