ಖಾಸಗಿ ಬಸ್​ಗಳಲ್ಲಿ ದುಪ್ಪಟ್ಟು ಹಣ ಸುಲಿಗೆ ಆರೋಪ; ಮೆಜೆಸ್ಟಿಕ್​ಗೆ ಆರ್​ಟಿಒ ಅಧಿಕಾರಿಗಳು ಭೇಟಿ

Apr 10, 2021

ಮಫ್ತಿಯಲ್ಲಿ ಬಂದು ಖಾಸಗಿ ಬಸ್​ಗಳಲ್ಲಿ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ತಪಾಸಣೆ ನಡೆಸಿದರು. ಪರಿಶೀಲನೆಯಲ್ಲಿ ಪ್ರಯಾಣಿಕರಿಂದಲೂ ದರದ ಬಗ್ಗೆ ಮಾಹಿತಿ ಪಡೆದರು. ದರ ಪಟ್ಟಿ ಹಿಡಿದು ಜನರ ಬಳಿ ದರದ ಬಗ್ಗೆ ವಿಚಾರಣೆ ನಡೆಸಿದರು. ನಂತರ ಹೆಚ್ಚು ದರ ಪಡೆಯದಂತೆ ಖಾಸಗಿ ಬಸ್​ನವರಿಗೂ ತಾಕೀತು ಮಾಡಿದರು.

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ ಬಂದು ತಲುಪಿದೆ. ಬಸ್​ಗಳಿಲ್ಲದೇ ಜನರು ತೀರಾ ಪರದಾಟ ಪಡುತ್ತಿದ್ದಾರೆ. ಅನಿವಾರ್ಯವಾಗಿ ಖಾಸಗಿ ಬಸ್​ಗಳಲ್ಲಿ, ಖಾಸಗಿ ವಾಹನಗಳಲ್ಲಿ ಪ್ರಾಯಾಣಿಕರು ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಖಾಸಗಿ ಬಸ್​ಗಳಲ್ಲಿ ದುಪ್ಪಟ್ಟು ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಕೇಳಿಬಂದ ಹಿನ್ನೆಲೆ ಮೆಜೆಸ್ಟಿಕ್ ಕೆಎಸ್ಆರ್​ಟಿಸಿ ನಿಲ್ದಾಣಕ್ಕೆ ಆರ್​ಟಿಒ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಫ್ತಿಯಲ್ಲಿ ಬಂದು ಖಾಸಗಿ ಬಸ್​ಗಳಲ್ಲಿ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ತಪಾಸಣೆ ನಡೆಸಿದರು. ಪರಿಶೀಲನೆಯಲ್ಲಿ ಪ್ರಯಾಣಿಕರಿಂದಲೂ ದರದ ಬಗ್ಗೆ ಮಾಹಿತಿ ಪಡೆದರು. ದರ ಪಟ್ಟಿ ಹಿಡಿದು ಜನರ ಬಳಿ ದರದ ಬಗ್ಗೆ ವಿಚಾರಣೆ ನಡೆಸಿದರು. ನಂತರ ಹೆಚ್ಚು ದರ ಪಡೆಯದಂತೆ ಖಾಸಗಿ ಬಸ್​ನವರಿಗೂ ತಾಕೀತು ಮಾಡಿದರು.

ಹಾಲಸ್ವಾಮಿ ಎದುರು ಹೆಚ್ಚು ದರ ವಸೂಲಿ ಮಾಡಿದ ಖಾಸಗಿ ಬಸ್ ಕಂಡಕ್ಟರ್
ಖಾಸಗಿ ಬಸ್​ಗಳಿಂದ ಹೆಚ್ಚಿನ ದರ ವಸೂಲಿ ಆರೋಪ ವಿಚಾರಕ್ಕೆ ಸಂಬಂಧಿಸಿ ಮೆಜೆಸ್ಟಿಕ್​ನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ ಜಂಟಿ ಸಾರಿಗೆ ಆಯುಕ್ತ ಹಾಲಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾಸಗಿ ಬಸ್ ಕಂಡಕ್ಟರ್ ಹಾಲಸ್ವಾಮಿ ಎದುರೇ ಪ್ರಯಾಣಿಕರಿಂದ ಹೆಚ್ಚು ದರ ವಸೂಲಿ ಮಾಡುತ್ತಿದ್ದರು.

ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಕಂಡಕ್ಟರ್ 370 ರೂ. ಬದಲು 400 ರೂ. ಕೇಳಿದ್ದ ಕಾರಣ ಪ್ರಯಾಣಿಕರು ರೊಚ್ಚಿಗೆದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಜಂಟಿ ಆಯುಕ್ತ ಹಾಲಸ್ವಾಮಿ ಹೆಚ್ಚುವರಿ ದರವನ್ನು ಜನರಿಗೆ ವಾಪಸ್ ಕೊಡಿಸಿದರು. ನಂತರ ಖಾಸಗಿ ಬಸ್​ಗಳಲ್ಲಿ ದರ ಪಟ್ಟಿ ಅಂಟಿಸಿದರು.

Source: TV9Kannada