ಕಾವೇರಿ ನೀರು ಹಂಚಿಕೆ: ರಾಜ್ಯ ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ಬೆಂಬಲ

Sep 11, 2021

ಮೈಸೂರು, ಸೆ.೯(ಎಸ್‌ಬಿಡಿ)- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು. ಮೈಸೂರಿಗೆ ಗುರು ವಾರ ಆಗಮಿಸಿದ್ದ ಅವರು ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿದರು. ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ನಮ್ಮ ಪಕ್ಷ ಬೆಂಬಲಿಸಲಿದೆ ಎಂದು ಸ್ಪಷ್ಟಪಡಿಸಿದರು.

ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಅಂತಿಮ ತೀರ್ಪಿನ ಅನ್ವಯ ಕರ್ನಾಟಕ ಸರ್ಕಾರ ಸಾಮಾನ್ಯ ವರ್ಷದಲ್ಲಿ ಜೂನ್‌ನಿಂದ ಆಗಸ್ಟ್ವರೆಗೆ
(ಮಳೆಗಾಲ) ೮೬.೮೩ ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸ ಬೇಕು. ಆದರೆ ಈ ವರ್ಷ ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆಯಿಂದಾಗಿ ಕೆಆರ್‌ಎಸ್ ಅಣೆಕಟ್ಟೆ ಇನ್ನೂ ಭರ್ತಿಯಾಗಿಲ್ಲ. ಹಾಗಾಗಿ ಆಗಸ್ಟ್ ೩೦ರವರೆಗೆ ೫೭.೦೪ ಟಿಎಂಸಿ ಅಡಿ ನೀರನ್ನು ಹರಿಸಲಾಗಿದ್ದು, ಬಾಕಿ ನೀರನ್ನು ಸೆಪ್ಟೆಂಬರ್‌ನಲ್ಲಿ ಹರಿಸುವುದಾಗಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಸರ್ಕಾರ ತಿಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ೨ ವರ್ಷದ ನಂತರ ನಾನು ಮೈಸೂರಿಗೆ ಬಂದಿದ್ದೇನೆ. ನಾನಿಂದು ರಾಜಕೀಯ ಮಾಡಲು ಬಂದಿಲ್ಲ. ಆ ರೀತಿಯ ಸನ್ನಿವೇಶ ಬಂದಾಗ ನಾನೇ ಮಾಧ್ಯಮದವರನ್ನು ಆಹ್ವಾನಿಸುತ್ತೇನೆ. ಪುಸ್ತಕ ಬಿಡುಗಡೆ ಸಂಬAಧ ಪ್ರೊ.ಕೆ.ಎಸ್.ರಂಗಪ್ಪ ಅವರೊಂದಿಗೆ ಚರ್ಚಿಸಲು ಬಂದಿದ್ದೇನೆ. ವೈಯಕ್ತಿಕ ಕಾರಣ ಹೊರತು ಮೈಸೂರು ಭೇಟಿಯಲ್ಲಿ ಮತ್ತೇನು ವಿಶೇಷತೆ ಇಲ್ಲ, ಯಾವ ರಾಜಕೀಯ ವಿಚಾರ ಮಾತನಾ ಡುವುದಕ್ಕೂ ಬಂದಿಲ್ಲ, ನನ್ನ ಬಗ್ಗೆ ತಪ್ಪು ತಿಳಿಯಬೇಡಿ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ಉತ್ತರ ನೀಡಿದೆ: ಕಲಬುರುಗಿ ಮೇಯರ್ ಚುನಾವಣೆ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ನನ್ನ ಜೊತೆ ಮಾತನಾಡಿದ್ದಾರೆ. `ಮೊದಲು ನಿಮ್ಮ ಪಕ್ಷದ ನಾಯಕರೊಡನೆ ಮಾತನಾಡಿ’ ಎಂದು ನಾನು ಅವರಿಗೆ ಸಲಹೆ ನೀಡಿದ್ದೇನೆ. ಕಲಬುರಗಿ ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿದ್ದ ೭ರಲ್ಲಿ ೪ ಸ್ಥಾನ ಗೆದ್ದಿದ್ದೇವೆ, ೨ ಸ್ಥಾನದಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೇವೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ಇಲ್ಲ ಎಂದು ಟೀಕಿಸುವವರಿಗೆ ಉತ್ತರ ಸಿಕ್ಕಿದೆ. ಇದು ಹೆಚ್.ಡಿ.ಕುಮಾರಸ್ವಾಮಿ ಅವರ ಶ್ರಮದ ಫಲ ಎಂದು ತಿಳಿಸಿದರು.

ಆತ್ಮೀಯ ಸ್ವಾಗತ: ವರ್ಷಗಳ ನಂತರ ಮೈಸೂರಿಗೆ ಆಗಮಿಸಿದ ಹೆಚ್.ಡಿ.ದೇವೇಗೌಡರನ್ನು ಸ್ಥಳೀಯ ಜೆಡಿಎಸ್ ಮುಖಂಡರು ಸರ್ಕಾರಿ ಅತಿಥಿ ಗೃಹದ ಬಳಿ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರಲ್ಲದೆ, ಜೈಕಾರ ಹಾಕಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಬಳಿಕ, ಸಭಾಂಗಣದಲ್ಲಿ ಪಕ್ಷದ ಶಾಸಕರು, ಪದಾಧಿಕಾರಿಗಳು, ಮುಖಂಡರೊAದಿಗೆ ಕೆಲಕಾಲ ಮಾತನಾಡಿದರು. ಶಾಸಕರಾದ ಸಾ.ರಾ.ಮಹೇಶ್, ಕೆ.ಮಹದೇವ್, ಅಶ್ವಿನ್‌ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಕೆ.ಟಿ.ಚೆಲುವೇಗೌಡ, ಅಬ್ದುಲ್ ಅಜೀಜ್(ಅಬ್ದುಲ್ಲಾ) ಮತ್ತಿತರರು ಉಪಸ್ಥಿತರಿದ್ದರು.

Source:mysurumithra